ಕಡೆಯ ಶ್ರಾವಣ ಶನಿವಾರದ ಹಿನ್ನೆಲೆ ರಾತ್ರಿ ಎಂಟು ಗಂಟೆಯಲ್ಲಿ ಶನಿಮಹಾತ್ಮ ಸ್ವಾಮಿ ಮತ್ತು ಜೇಷ್ಠದೇವಿಯ ವಿಗ್ರಹಗಳನ್ನು ಬೆಳ್ಳಿ ಅಡ್ಡ ಪಲ್ಲಕ್ಕಿಯಲ್ಲಿರಿಸಿ ವಿಶೇಷ ಮೆರವಣಿಗೆ ಮಾಡುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ಗಳಿಗೆ ತೆರೆ ಎಳೆಯಲಾಗಿದೆ ದೇವಸ್ಥಾನಕ್ಕೆ ಶುಕ್ರವಾರದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿ ಶನಿಮಹಾತ್ಮ ಸ್ವಾಮಿಗೆ ವಿಶೇಷ ನವಗ್ರಹ ಸೇರಿದಂತೆ ಹಲವು ಪೂಜಾ ಕೈಂಕರಗಳನ್ನು ಕೈಗೊಂಡಿದ್ದರು ಬೆಳ್ಳಿ ಅಡ್ಡ ಪಲಕ್ಕಿ ಉತ್ಸವಕ್ಕೆ ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಜಿಯನ್ನಿಲ್ ಕುಮಾರ್ ಉಪಾಧ್ಯಕ್ಷರಾದ ವೆಂಕ್ಟ್ರಮ್ ರೆಡ್ಡಿ ಚಾಲನೆ ನೀಡಿದರು