ನಿಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಸಮಾಜದ ಏಳಿಗೆಗೆ ಎಲ್ಲಾ ಸಮುದಾಯವರು ಒಗ್ಗಟ್ಟಿನಿಂದ ಇರಬೇಕು. ಮುಂದಿನ ದಿನಗಳ ರಾಜಕೀಯ ಶಕ್ತಿ ನಿಮಗೆ ವೃದ್ಧಿ ಆಗಲಿಕ್ಕೆ ಒಗ್ಗಟ್ಟು ಕಾರಣವಾಗುತ್ತದೆ. ಎಲ್ಲಾ ಬುಡಕಟ್ಟು ಸಮಾಜದವರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಬರೀ ಶಾಲೆಗೆ ಕಳುಹಿಸುವುದಲ್ಲ ಉನ್ನತ ಶಿಕ್ಷಣದವರೆಗೆ ಓದಿಸುವುದಕ್ಕೆ ನಿಮ್ಮ ಪ್ರೋತ್ಸಾಹ ಸದಾ ಅವರೊಂದಿಗೆ ಇರಬೇಕು ಎಂದು ಕಾರ್ಮಿಕ ಸಚಿವರಾದ ಸಂತೋಷ್. ಎಸ್ ಲಾಡ್ ಅವರು ಹೇಳಿದರು. ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ನುಲಿಯ ಚಂದಯ್ಯ ಜಯಂತ್ಯೋತ್ಸವ ಸಮಿತಿ ಸಹಯೋಗದೊಂದಿಗೆ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ, ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.