ರಾಮನಗರ--ಧರ್ಮಸ್ಥಳ ಹಿಂದೂ ದರ್ಮದ ಪುರಾತನ ಸಂಪತ್ತು ಎಂದು ನಗರದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಬೇಕಾದ್ದದ್ದು ನಮ್ಮ ಧರ್ಮ.ಅದಕ್ಕೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿತ್ತು. ಸಿಎಂ ಹಾಗೂ ಗೃಹಸಚಿವರು ದೀರ್ಘವಾದ ಆಲೋಚನೆ ಮಾಡಿ ಎಸ್ಐಟಿ ರಚನೆ ಮಾಡಿ ತನಿಖೆ ಮಾಡಿಸಿದ್ದಾರೆ. ಇದರಲ್ಲಿ ಷಡ್ಯಂತ್ರ ಏನು ಇಲ್ಲ. ಇದು ಹಿಂದೂ ಧರ್ಮದ ಪುರಾತನ ಸಂಪತ್ತು. ಮಂಜುನಾಥಸ್ವಾಮಿ ಮೇಲೆ ನಂಬಿಕೆ ಇಟ್ಟಿದ್ದೇವೆ. ಧಾರ್ಮಿಕ ಭಾವನೆ ದಕ್ಕೆ ಆಗಬಾರದು , ಕಳಂಕ ನಿವಾರಣೆ ಆಗಬೇಕು ಅಂತ ಕಾಂಗ್ರೆಸ್ ಪಕ್ಷ. ಎಸ್ಐಟಿ ತನಿಖೆ ಮಾಡಿಸಿದೆ. ಇದನ್ನ ಹೆಗ್ಗಡೆ ಅವರೇ ಸ್ವಾಗತ ಮಾಡಿದ್ದಾರೆ ಎಂದರು.