ಹಾಸನ: ಆಯಾ ಪ್ರದೇಶದ ಜನಪದ ಕಲೆ ಅಲ್ಲಿನ ಸಂಸ್ಕ್ರುತಿಯನ್ನು ಬಿಂಬಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದರು. ಹಾಸನ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಇಂದು ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಹಾಗೂ ತಾಲೂಕು ಘಟಕ ನಾನು ಮಹಿಳಾ ಪ್ರಥಮದರ್ಜೆ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವ ಕಲೆ ನಿರಂತರವಾಗಿ ಚಲನಶೀಲತೆ ಉಳಿಸಿಕೊಂಡಿದೆಯೋ ಆ ಕಲೆ ಎಂದಿಗೂ ಜೀವಂತವಾಗಿ ತಲ ತಲಾಂತರದ ವರೆಗೆ ಉಳಿಯಲು ಸಾಧ್ಯ.ತಮ್ಮ ಜಾನಪದ ಕಲೆಯನ್ನು ಆ ಸಮುದಾಯದ ಜನ ಚಲನಶೀಲತೆಯಲ್ಲಿ ಇಟ್ಟುಕೊಂಡಾಗ ಮಾತ್ರ ಅದನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದರು.