ರಕ್ತದಾನ ಮಾಡಿದರೆ ರಕ್ತ ಕಡಿಮೆಯಾಗುವುದಿಲ್ಲ ರಕ್ತ ವೃದ್ಧಿಸುತ್ತದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರವಿಕುಮಾರ್ ಹೇಳಿದರು. ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಗಣೇಶೋತ್ಸವದ ಅಂಗವಾಗಿ ಕೋಟೆ ಬ್ಲಾಕ್ ಗೆಳಯರ ಬಳಗದಿಂದ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಈಗನ ಯುವಕರು ರಕ್ತದಾನ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು.ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಸ್ವಾಮಿ ಮಾತನಾಡಿದರು.