ತಮ್ಮ ಮಗ ಪದೇ ಪದೆ ಮನೆ ಬಿಟ್ಟು ಹೋಗುತ್ತಿದ್ದಾನೆ ಎಂದು ಜ್ಯೋತಿಷಿ ಮಾತು ಕೇಳಿ ವಾಮಾಚಾರಕ್ಕೆ ಬಂದಿದ್ದ ಕುಟುಂಬವನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಳ್ಯಾಳ ಗ್ರಾಮಸ್ಥರು ದೂರು ನೀಡಿದ್ದು ನಿನ್ನೆ ರಾತ್ರಿ ಹುಬ್ಬಳ್ಳಿಯ ಇಂದಿರಾನಗರದಲ್ಲಿ ವಾಸವಿರುವ ಆಂಧ್ರಪ್ರದೇಶ ಮೂಲದ ಕುಟುಂಬದಿಂದ ವಾಮಾಚಾರ ಮಾಡಿದ್ದು. ಮದ್ಯ ರಾತ್ರಿ ತಮ್ಮ ಮಗ ಪದೇ ಪದೆ ಮನೆ ಬಿಟ್ಟು ಹೋಗುತ್ತಿರುವ ಹಿನ್ನಲೆಯಲ್ಲಿ ಪೂಜೆ ಮಾಡಲಿಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ದೂರು ಬಂಧ ಹಿನ್ನಲೆ ಯರಿಸ್ವಾಮಿ , ಹರೀಶ್, ನಾಗೇಶ್ ಹಾಗೂ ಗೋಪಾಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.