ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ನಾಯಿಗಳ ದತ್ತು ಪಡೆಯುವ ವಿಶೇಷ ಅಭಿಯಾನಕ್ಕೆ ಇಂದು ಹುಬ್ಬಳ್ಳಿಯ ತೋಳನಕೆರೆಯಲ್ಲಿ ಚಾಲನೆ ನೀಡಲಾಯಿತು. "People for animals(PFA), Hubli", "Animal Rescue trust" ಹಾಗೂ ಹಲವು ಪ್ರಾಣಿ ಕಲ್ಯಾಣ ಸಂಸ್ಥೆಗಳು,ಪ್ರಾಣಿ ಪ್ರಿಯರು ಇಂದು ಅನೇಕ ನಾಯಿಮರಿಗಳನ್ನು ದತ್ತು ಪಡೆದರು. ಈ ಸಂದರ್ಭದಲ್ಲಿ ಹುಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್, ಉಪಮಹಾಪೌರರು ಸಂತೋಷ.ಚವ್ಹಾಣ, ಪಾಲಿಕೆ ಆಯುಕ್ತರು ಡಾ.ರುದ್ರೇಶ.ಘಾಳಿ, ವಿರೋಧ ಪಕ್ಷದ ನಾಯಕರು ಇಮ್ರಾನ.ಯಲಿಗಾರ ಸೇರಿದಂತೆ ಮೊದಲಾದವರು ಇದ್ದರು.