ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಶೆಟ್ಟಿ ವೈನ್ಸ್ ಬಾರ್ ಮುಂದೆಯೇ ರವಿವಾರ ಕ್ಷುಲ್ಲಕ ವಿಚಾರಕ್ಕೇ ಮೂವರು ಹೊಡೆದಾಡಿಕೊಂಡ ಪರಿಣಾಮ ಓರ್ವನಿಗೆ ಗಾಯವಾದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರ ರಸ್ತೆಯಲ್ಲಿನ ಶೆಟ್ಟಿ ವೈನ್ಸ್ ಬಾರ್ ಮುಂದೆ ಸೋಮವಾರ ರಾತ್ರಿ ಮಧ್ಯ ಸೇವನೆ ಮಾಡಲು ಬಂದಿದ್ದ ಕೆಲವು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೇ ಮಾತಿಗೆ ಮಾತು ಬೆಳೆದಿದೆ.ಆಗ ಓರ್ವ ಯುವಕ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಓರ್ವ ಯುವಕ ಬೈಕ್ ಮೇಲೆ ಬಿದ್ದು ಗಾಯಗೊಂಡಿದ್ದಾನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.