ನಗರದ ಪ್ರವಾಸಿ ಮಂದಿರದ ಬಳಿ ಶನಿವಾರ ಸಚಿವ ಡಿ.ಸುಧಾಕರ್ ಅವರನ್ನು ರೈತ ಮುಖಂಡರು ಭೇಟಿ ಮಾಡಿ ಹೂವಿನ ಮಾರುಕಟ್ಟೆ ಕುರಿತು ಚರ್ಚೆ ನಡೆಸಿದರು. ನಂತರ ಸಚಿವರು ಮಾತನಾಡಿ ನಗರದ ಹೂವಿನ ಮಾರುಕಟ್ಟೆಯಿಂದ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಹೂ ಮಾರುಕಟ್ಟೆಯನ್ನು ಇದೇ ಸ್ಥಳದಲ್ಲಿ ಮುಂದುವರಿಸಬೇಕೋ ಅಥವಾ ಸ್ಥಳಾಂತರ ಮಾಡಬೇಕೋ ಎಂಬ ವಿಷಯ ಕುರಿತು ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಈ ವೇಳೆ ರೈತ ಮುಖಂಡ ಕಸವನಹಳ್ಳಿ ರಮೇಶ್, ಅಧಿಕಾರಿಗಳು ಇದ್ದರು.