ಬಳ್ಳಾರಿ ನಗರದ ಬಹಳಷ್ಟು ರಸ್ತೆಗಳಲ್ಲಿ `ತೆಗ್ಗು-ಕುಣಿ-ಗುಂಡಿ’ಗಳು ಬಾಯ್ತೆರೆದು ನಿಂತಿದ್ದು, ಬಳ್ಳಾರಿ ಮಹಾನಗರ ಪಾಲಿಕೆ, ಜಿಲ್ಲಾ ಆಡಳಿತ, ಪಿಡಬ್ಲೂಡಿ, ಮತ್ತಿತರೆ ಇಲಾಖೆಯ ಅಧಿಕಾರಿಗಳು, ಅದರಲ್ಲಿಯೂ ಮುಖ್ಯವಾಗಿ ನಗರಪಾಲಿಕೆ ಸದಸ್ಯರುಗಳು, ಪಕ್ಷಾತೀತವಾಗಿ ಈ ಬಗ್ಗೆ ಆದ್ಯತೆಯ ಮೇರೆಗೆ ಗಮನ ನೀಡಿ, ಈ `ಗುಂಡಿ’(ಕುಣಿ)ಗಳನ್ನು ಮುಚ್ಚಿಸಬೇಕು ಎಂದು ಸಾರ್ವಜನಿಕರು ಭಾನುವಾರ ಸಂಜೆ 6ಗಂಟೆಗೆ ಆಗ್ರಹಪಡಿಸಿದ್ದಾರೆ. `ಗಣೇಶ’ ಹಬ್ಬದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕೆಲವೊಂದು `ರಸ್ತೆ’ಗಳಲ್ಲಿ ಮಣ್ಣು-ಗರಸು ಹಾಕಿ ತೇಪೆ ಕಾರ್ಯ ನಡೆದಿದೆಯಾದರೂ, ಅದನ್ನು ಗುತ್ತಿಗೆದಾರರು, ಅಧಿಕಾರಿಗಳು `ಸಮರ್ಪಕ’ವಾಗಿ ನಿರ್ವಹಿಸಿಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬರುತ್ತಿವೆ.