ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರಾಜು ಲೆಂಗಟಿ ಕಮಲಾಪುರ ತಾಲೂಕಿನ ಅಂಬಲಗಾ ಪಿಡಿಒ ಜಗನ್ನಾಥ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2023ರಲ್ಲಿ ಲಂಚದ ಆರೋಪದಡಿ ಅಮಾನತ್ತು ಆದರೂ, ತನಿಖೆ ನಡೆಸದೆ ಸೇವೆಗೆ ವಾಪಸ್ ಪಡೆದು ಈಗ ನರೇಗಾ ಪ್ರಬಾರಿ ಸಹಾಯಕ ನಿರ್ದೇಶಕ ಹುದ್ದೆ ನೀಡಲಾಗಿದೆ. ರಾಜಕೀಯ ಪ್ರಭಾವದಿಂದ ಹುದ್ದೆ ನೀಡಿರುವುದು ಸರಿಯಲ್ಲ,ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಿಪಂ ಮುತ್ತಿಗೆ ಹಾಕುವುದಾಗಿ ರಾಜು ಲೆಂಗಟಿ ಶೆನಿವಾರ 5 ಗಂಟೆಗೆ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.