ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ದೇವಸ್ಥಾನಗಳಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಮಾಳೂರು ಪೊಲೀಸರು ಗುರುವಾರ ಬೆಳಿಗ್ಗೆ 11 ಗಂಟೆಗೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗದ ಸವಳಂಗ ನಿವಾಸಿ ಸಂದೀಪ್ (22) ಎಂದು ಗುರುತಿಸಲಾಗಿದೆ. ಸಂದೀಪ್ ಆಗಸ್ಟ್ 2ರಂದು ತೀರ್ಥಹಳ್ಳಿಯ ಹಣೆಗೆರೆ ಕಟ್ಟೆಯ ಗರಗ ಬಳಿ ಇರುವ ದೇವಸ್ಥಾನವೊಂದರಲ್ಲಿ 2 ಚಿನ್ನದ ತಾಳಿ ಹಾಗೂ 5 ಚಿನ್ನದ ಗುಂಡುಗಳನ್ನು ಕಳವು ಮಾಡಿದ್ದ. ಇದಾದ ಬಳಿಕ ಆಗಸ್ಟ್ 22ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕೃತ್ಯ ಎಸಗಿ, 2 ಚಿನ್ನದ ತಾಳಿ ಮತ್ತು ಒಂದು ಚಿನ್ನದ ಮೂಗುತಿಯನ್ನು ಕದ್ದು ಪರಾರಿಯಾಗಿದ್ದ. ಈ ಎರಡೂ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು.