ಕನಕಪುರ -- ರಾಜ್ಯದ ಉಪ ಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಸ್ವಗ್ರಾಮಕ್ಕೆ ತೆರಳಿ ತಮ್ಮ ಪೂರ್ವಿಕರ ಸಮಾಧಿಗೆ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬದಂದು ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟೂರಾದ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ತಂದೆ ಕೆಂಪೇಗೌಡ ಹಾಗೂ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅಂತಯೇ ಇಂದು ಕೂಡ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪತ್ನಿ ಉಷಾ,ಪುತ್ರಿ ಐಶ್ವರ್ಯ, ಪುತ್ರ ಆಕಾಶ್, ಸೇರಿದಂತೆ ಕುಟುಂಬಸ್ಥರೊಂದಿಗೆ ತಂದೆ ಹಾಗೂ ಕುಟುಂಬದ ಹಿರಿಯರ ಸಮಾಧಿಗೆ ಎಡೆ ಇಟ್ಟು ಪು