ಮಾಗಡಿ - ತಾಲ್ಲೂಕಿನ ದುರ್ಗಮ ಅರಣ್ಯ ಎನಿಸಿಕೊಂಡಿರುವ ಸಾವನದುರ್ಗದ ಕರಿ ಬೆಟ್ಟದ ಮೇಲಿರುವ ವಿನಾಯಕ ವಿಗ್ರಹಕ್ಕೆ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟ ಎನಿಸಿಕೊಂಡಿರುವ ಸಾವನದುರ್ಗ ಬೆಟ್ಟದ ಪಕ್ಕದ ಕರಿಬೆಟ್ಟದಲ್ಲಿ ಸ್ಥಾಪಿಸಿರುವ ವಿಘ್ನ ವಿನಾಯಕನಿಗೆ ವರ್ಷದ ಗಣೇಶ ಚತುರ್ಥಿಯಂದು ಒಂದು ದಿನ ಮಾತ್ರ ಪೂಜೆ ಸಲ್ಲಿಸಲು ಅವಕಾಶ, ಹಾಗಾಗಿ ಇಂದು ಸ್ಥಳೀಯರು ಸೇರಿದಂತೆ ಹೊರ ರಾಜ್ಯದ ಭಕ್ತರ ಇಂದು ಬೆಳಿಗ್ಗೆಯಿಂದಲೇ ದುರ್ಗಮ ಹಾದಿಯಲ್ಲಿ ತೆರಳಿ ವಿನಾಯಕನಿಗೆ ಪೂಜೆ ಸಲ್ಲಿಸಿದರು. ಪ್ರಾಯಾಸದ ಹಾದಿಯಲ್ಲಿ ಕಷ್ಟಪಟ್ಟು ತೆರಳಿದ ಆಸ್ತಿಕರು ರಮಣ