ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಭೂಸನೂರ ಎಸ್‌ಎಸ್‌ಕೆಎನ್ ಕಾರ್ಖಾನೆಯ ಸಾಮಾನ್ಯ ಸಭೆ ಕಲಬುರಗಿ ಬದಲಾಗಿ ಕಾರ್ಖಾನೆಯಲ್ಲಿಯೇ ನಡೆಸುವಂತೆ ಶೇರ್ ಹೋಲ್ಡರ್‌ಗಳು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 12 ರಂದು ಕಲಬುರಗಿಯಲ್ಲಿ ಸಾಮಾನ್ಯ ಸಭೆ ನಡೆಸಲು ಕಾರ್ಖಾನೆ ಆಢಳಿತ ಮಂಢಳಿ ನಿರ್ಧರಿಸಿದೆ. ಆದರೆ ಕಾರ್ಖಾನೆಯ ಶೇ.75 ರಷ್ಟು ಶೇರ್ ಹೊಲ್ಡರ್‌ಗಳು ಆಳಂದ ತಾಲೂಕಿನ ರೈತರಿದ್ದಾರೆ. ಸದ್ಯ ಅತಿವೃಷ್ಟಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಣ ಖರ್ಚು ಮಾಡಿ ಕಲಬುರಗಿಗೆ ತೆರಳಿ ಸಭೆಗೆ ಹಾಜರಾಗುವದು ಕಠಿಣವಾಗುತ್ತದೆ. ಹೀಗಾಗಿ ಸಭೆಯನ್ನು ಕಾರ್ಖಾನೆಯಲ್ಲಿ ನಡೆಸುವಂತೆ ಕಾರ್ಖಾನೆಯ ಅಧ್ಯಕ್ಷರು ಮತ್ತು ಎಂಡಿ ಅವರಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.