ಬೇಲೂರು ತಾಲೂಕು ಕಚೇರಿ ಹಿಂಭಾಗದಲ್ಲಿ ಗಿಡ ಗಂಟೆಗಳನ್ನು ತೆರವು ಮಾಡಿ ಸಂಪೂರ್ಣವಾಗಿ ಸ್ವಚ್ಚಗೊಳಿಸಿದ ನಂತರ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲಾಗುವುದೆಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ತಿಳಿಸಿದರು. ಬೇಲೂರು ತಾಲೂಕು ಕಚೇರಿ ಹಿಂಭಾಗದ ಸುತ್ತಮುತ್ತಲಿನ ಕೊಳಚೆ ನೀರು ನಿಂತು ಗಿಡಗಂಟೆಗಳಿಂದ ತುಂಬಿ ಅಸ್ವಚ್ಚತೆಯಿಂದ ಕಾಣುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಮನವಿ ಮಾಡಿದ ಹಿನ್ನಲೆಯಲ್ಲಿ ಬೇಲೂರು ತಾಲೂಕು ಕಚೇರಿ ಹಿಂಭಾಗದ ಜಾಗವನ್ನು ಸುಮಾರು 5 ವರ್ಷಗಳ ಕಾಲದಿಂದ ಇದ್ದ ಗಿಡಗಂಟೆಗಳನ್ನು ಸ್ವಚ್ಛಗೊಳಿಸಲಾಗಿದೆ. ಪುರಸಭೆ ವ್ಯಾಪ್ತೀಯ 3 ನೇ ವಾರ್ಡ್ ಅಕ್ಕಪಕ್ಕದ ಕೊಳಚೆ ನೀರು ಒಳಚರಂಡಿ ನೀರು ಹರಿಯುವುದರಿಂದ ತೊಂದರೆಯಾಗುತ್ತಿತ್ತು.