ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಶ್ರಾವಣದ ಕೊನೆಯ ಶುಕ್ರವಾರದಂದು ಮೌನೇಶ್ವರ ಪಲ್ಲಕ್ಕಿ ಉತ್ಸವ ಭಕ್ತಿ ಭಾವದಿಂದ ಅಗಸ್ಟ ೨೨ ಮಧ್ಯಾಹ್ನ ೧೨ ನಡೆಯಿತು. ಕಾಳಿಕಾದೇವಿ ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದಾಗ ಸಮಾಜದ ಬಾಂಧವರು ತಮ್ಮ ತಮ್ಮ ಮನೆಗಳ ಮುಂದೆ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಪಲ್ಲಕ್ಕಿ ಉತ್ಸವದ ನೇತೃತ್ವವನ್ನು ಹಿರಿಯರಾದ ವೀರಭದ್ರಪ್ಪ ಹಿಪ್ಪರಗಿ ನಾರಾಯಣಪ್ಪ ಹೂಲಗೇರಿ, ರಾಮಣ್ಣ ಮರೋಳ, ಮನೋಹರ ಕಟಗೂರ, ಜಗದೀಶ ಮರೋಳ, ಗುರು ಪತ್ತಾರ, ಮುತ್ತಣ್ಣ ಪತ್ತಾರ, ಪ್ರಶಾಂತ ಪತ್ತಾರ, ಗಂಗಣ್ಣ ಬಡಿಗೇರ, ನಾರಾಯಣಪ್ಪ ಬಡಿಗೇರ , ಡಾ ನಾಗಲಿಂಗ ಪತ್ತಾರ ಜಗದೀಶ ಹೂಲಗೇರಿ ಮತ್ತಿತರರು ವಹಿಸಿದ್ದರು