ರಾಜ್ಯ ಹಾಗೂ ದೇಶಾಧ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಸುಜಾತ ಭಟ್ ತನ್ನ ಮಗಳು ಕಣ್ಮರೆ ಅಂತ ಮಾಡಿದ್ದ ಆರೋಪಕ್ಕೆ ಇವತ್ತು ಬಿಗ್ ಟ್ವಿಸ್ಟ್ ಸಿಕ್ಕಿದೆ. ಖುದ್ದು ಸುಜಾತಾ ಭಟ್ ತಾನು ತನ್ನ ಮಗಳು ಅನನ್ಯಾ ಭಟ್ ಕಣ್ಮರೆ ಅಂತ ಹೇಳಿದ್ದ ಸ್ಟೋರಿಯೇ ಸುಳ್ಳು ಅಂತ ಹೇಳಿದ್ದಾರೆ. ನನಗೆ ಮಗಳೇ ಇಲ್ಲ, ನಾನು ತೋರಿಸಿದ್ದ ಫೋಟೋ ಕೂಡ ಫೇಕ್ ಅಂದಿದ್ರು. ಇದರ ಬೆನ್ನಲ್ಲೇ ಸುಜಾತಾ ಭಟ್ ತನ್ನ ಮಗಳು ಅಂತ ತೋರಿಸಿದ್ದ ಫೋಟೋದಲ್ಲಿರುವ ವಾಸಂತಿ ಅನ್ನೋರ ಸಹೋದರ ವಿಜಯ್ ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತಾ ಭಟ್ ಕೈವಾಡ ಇದೆ ಅಂತ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿಜಯ್, ಸುಜಾತಾ ಭಟ್ ಹೋದಲ್ಲೆಲ್ಲಾ ಅನೇಕ ಸಾವುಗಳು ನಡೆದಿವೆ. ಸುಜಾತಾ ವಾಸಂತಿ ಡೆತ