ಶಿವಮೊಗ್ಗ ನಗರ ಭಾಗದಲ್ಲಿರುವ ಉದ್ಯಾನವನಗಳ ನಿರ್ವಹಣೆ ಹಾಗೂ ಸ್ವಚ್ಚತೆಗೆ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಅಗತ್ಯ ಸಲಕರಣೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಸೋಮವಾರ ಸಂಜೆ 4 ಗಂಟೆಗೆ ಮನವಿ ಸಲ್ಲಿಸಿದರು. ನಗರದಲ್ಲಿ 600 ಕ್ಕೂ ಹೆಚ್ಚು ಉದ್ಯಾವನಗಳಿದ್ದು, ಬಹುತೇಕ ಉದ್ಯಾನವನಗಳು ಜನರ ಉಪಯೋಗಕ್ಕೆ ಯೋಗ್ಯವಾಗದೆ ಹಂದಿ, ಹಾವು ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಉದ್ಯಾನವನಗಳ ನಿರ್ವಹಣೆಗೆ ಬೇಕಾಗಿರುವ ಸಲಕರಣೆ ಮತ್ತು ಸಮರ್ಪಕವಾದ ಕಾರ್ಮಿಕರನ್ನು ನೀಡದಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಆರೋಪಿಸಿದರು.