ಕುಂದಗೋಳ: ಕುಂದಗೋಳದಲ್ಲಿ ಸ್ಥಳೀಯ ಜೆಎಂಎಫ್ ಸಿ ನ್ಯಾಯಾಧೀಶೆ ಶ್ರೀಮತಿ ಗಾಯತ್ರಿ ಅವರು, ನ್ಯಾಯಾಲಯಕ ಬರಲು ಅಸಾಧ್ಯವಾಗಿದ್ದ ವೃದ್ಧರೊಬ್ಬರ ಮನೆಗೆ ಸ್ವತಃ ಭೇಟಿ ನೀಡಿ, ೧೩ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ತಿ ಹಂಚಿಕೆ ವ್ಯಾಜ್ಯವನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದರು. ಲೋಕ್ ಅದಾಲತ್ ನಲ್ಲಿ ನಡೆದ ಈ ಕಾರಗಯದಿಂದ ಅವರು ಮೆಚ್ಚುಗೆಗೆ ಪಾತ್ರರಾದರು. ಈ ಲೋಕ್ ಅದಾಲತ್ ನಲಯ ಆಸ್ತಿ ವಿವಾದಗಳು ಸೇರಿದಂತೆ ಹಲವು ಪ್ರಕರಣಗಳನಯ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.