ಸಪ್ಟೆಂಬರ್ 4 ಮಧ್ಯಾಹ್ನ ಸುಮಾರು ಒಂದು ಗಂಟೆಯ ಹೊತ್ತಿಗೆ ಬಿಎಂಟಿಸಿ ಚಾಲಕನ ಜೊತೆ ಕಾರು ಚಾಲಕನೊಬ್ಬ ಕಿರಿಕ್ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ನಗರದ ಕದಿರೇನಹಳ್ಳಿ ಸಮೀಪ ಕಾರು ಚಾಲಕನೊಬ್ಬ ಬಿಎಂಟಿಸಿ ಡ್ರೈವರ್ ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ರ್ಯಾಷ್ ಆಗಿ ಡ್ರೈವ್ ಮಾಡಿಕೊಂಡು ಬಂದು ಬಸ್ ಮುಂದೆ ನಿಲ್ಲಿಸಿದ್ದು ಅಲ್ಲದೆ ಚಾಲಕನ ಜೊತೆ ಕ್ಯಾತೆ ತೆಗದಿದ್ದಾನೆ. ಘಟನಾ ಸಂಬಂಧ ಕಾರು ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತ ಆಗಿದೆ ಈ ಒಂದು ದೃಶ್ಯ ಬಿಎಂಟಿಸಿ ಸಿಸಿಟಿವಿಯಲ್ಲಿ ಸೆರೆಯಾಗಿದೆ