ನವಲಗುಂದ: ನಿರಂತರ ಮಳೆಯಿಂದ ಹಾನಿಯಾಗಿರುವ ನವಲಗುಂದ ಪಟ್ಟಣದ ಮನೆಗಳು, ನಾಯಕನೂರ ಗ್ರಾಮದ ಹೊಲಗಳಲ್ಲಿನ ಹೆಸರು ಮತ್ತು ಈರುಳ್ಳಿ ಬೆಳೆಯನ್ನು ಸಚಿವರಾದ ಸಂತೋಷ್ ಲಾಡ್ ಅವರು ಪರಿಶೀಲಿಸಿದರು. ಇದೇ ವೇಳೆ ನರಗುಂದ ರಸ್ತೆಯ ತಡಹಾಳ ಸೇತುವೆಯನ್ನು ವೀಕ್ಷಿಸಲಾಯಿತು. ಈ ವೇಳೆ ಶಾಸಕರಾದ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಜಿಆರ್ ಜೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.