ಆಳಂದ ಹಳೆ ಚಕ್ ಪೊಸ್ಟ್ ಹತ್ತಿರ ದ್ವಿಚಕ್ರ ವಾಹನ ಅಪಘಾತವಾಗಿ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊರ್ವ ಯುವಕ ಹಾಗೂ ವಯೋವೃದ್ದರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಆಳಂದ ಶರಣನಗರ ನಿವಾಸಿ ಸಮರ್ಥ ಬಟಗೇರಿ 18 ಮೃತ ಯುವಕನೆಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಇನ್ನೋರ್ವ ಯುವಕ ಗಂಭೀರಗಾಯಗೊಂಡಿದ್ದಾನೆ. ಅಲ್ಲದೆ ಪಾದಾಚಾರಿ ಅಮೃತ ಎಂಬ (80) ವಯೋವೃದ್ಧರ ಕೈ ಮುರಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕರು ಬೈಕ್ ನಲ್ಲಿ ತೆರಳುವಾಗಿ ಅಮೃತ ಅವರಿಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎ