ವಿರಾಜಪೇಟೆ: ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ನಿಸರ್ಗ ಬಡಾವಣೆಯ ನಿವಾಸಿಗಳು ಸಾರ್ವಜನಿಕರ ಅನುಕೂಲಕ್ಕೆ ಬಸ್ ನಿಲ್ದಾಣವನ್ನ ಮಾಡಿಕೊಡುವಂತೆ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಬಳಿ ಮನವಿ ಮಾಡಿದ ಹಿನ್ನಲೆ ಸೂಕ್ತ ಬಸ್ ನಿಲ್ದಾಣವನ್ನ ನಿರ್ಮಿಸಲಾಗಿತ್ತು. ಬಸ್ ನಿಲ್ದಾಣ ಆದ ಬಳಿಕ ಬಸ್ ತಂಗುದಾಣದ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚಗೆ ಗ್ರಾಸವಾಗಿದೆ. ಸದ್ಯ ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂಬುದು ಸ್ಥಳೀಯರ ವಾದವಾದ್ರೆ ಸಮಾಜಿಕ ಜಾತಣದಲ್ಲಿ ಇದಕ್ಕೆ ವಿರೋಧ ಕೇಳಿಬರುತ್ತಿದೆ. ಈ ಬಗ್ಗೆ ಸ್ಥಳೀಯರ ನಿವಾಸಿ ಭವ್ಯ ಮಾತನಾಡಿ ಈ ಬಸ್ ತಂಗುದಾಣ ದಿಂದ ಪಕ್ಕದಲ್ಲಿ ಇರುವ ಕಾಲೇಜು ವಿದ್ಯ