ಶನಿವಾರಸಂತೆ ಗಣಪತಿ ದೇವಾಲಯದಲ್ಲಿ ಹಾಗೂ ಮಾಲಂಬಿ ವಿನಾಯಕ ಸೇವಾ ಸಮಿತಿ, ಕಣಿವೆ ಬಸವನಹಳ್ಳಿ ಗೌರಿ ಗಣೇಶ ಸೇವಾ ಸಮಿತಿಯಿಂದ ಸೇರಿದಂತೆ ಇತರೆಡೆ ಗಳಲ್ಲಿ ಇಂದು ಬೆಳಗ್ಗೆ ಗೌರಿ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡಿ ವಿವಿಧ ಪೂಜಾ ವಿದೀವಿದಾನಗಳನ್ನು ನಡೆಸಲಾಯಿತು.ಬೆಳಗ್ಗೆ ಗಂಗೆ ಪೂಜೆ ನಂತರ ಮಹಾ ಮಂಗಳಾರತಿ ಸೇರಿದಂತೆ ಭಕ್ತರು ಭಕ್ತಿಯಿಂದ ಗೌರಿ ಪೂಜೆ ನೆರವೇರಿಸಿದರು. ನಂತರ ಪ್ರಸಾದ ವಿನಿಯೋಗ ನಡೆಯಿತು.ಸೇವಾ ಸಮಿತಿ ಸದಸ್ಯರು ಹಾಗೂ ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.