ಶಿವಮೊಗ್ಗ ನಗರದ ಕಂಟ್ರಿ ಕ್ಲಬ್ ಬಳಿಯ ಮನೆಯೊಂದರಲ್ಲಿ ಹೊರಗೆ ಇಟ್ಟಿದ್ದ ಶೂ ಒಳಗೆ ಸುಮಾರು 4 ಅಡಿ ಉದ್ದದ ಕ್ಯಾಟ್ ಸ್ನೇಕ್ ಕಾಣಿಸಿಕೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಡೆದಿದೆ. ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ. ಮನೆಯಲ್ಲಿ, ರ್ಯಾಕ್ ಮೇಲೆ ಇಟ್ಟಿದ್ದ ಶೂ ಒಳಗೆ ಹಾವು ಅಡಗಿಕೊಂಡಿರುವುದನ್ನು ಮನೆಯವರು ಗಮನಿಸಿದ್ದರು. ತಕ್ಷಣವೇ ಅವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಧಾವಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ. ಮಳೆಗಾಲದಲ್ಲಿ ಜನರು ಎಚ್ಚರ ವಹಿಸಬೇಕಿದೆ.