ಹಾವೇರಿಯ ದಾನೇಶ್ವರಿನಗರದಲ್ಲಿನ ಗಣೇಶ ದೇವಸ್ಥಾನದ ಅರ್ಚಕರ ಚನ್ನಬಸಯ್ಯ ಹಿರೇಮಠ ಗಣೇಶನಿಗೆ ನವಫಲಗಳಿಂದ ಅಲಂಕಾರ ಮಾಡಿದ್ದಾರೆ. ದಾಳಿಂಬೆ ದ್ರಾಕ್ಷಿ, ಸೇಬು, ಮೊಸಂಬಿ, ಕಿತ್ತಳೆ,ಬಾಳೆಹಣ್ಣು, ಫೈನಾಪಲ್, ಚಿಕ್ಕು ಮತ್ತು ಪೇರಲ ಹಣ್ಣುಗಳಿಂದ ಅಲಂಕಾರ ಮಾಡಿದ್ದಾರೆ. ಒಂಭತ್ತು ದಿನಗಳ ಕಾಲ ಪೂಜೆ ಸಲ್ಲಿಸಿದ ನಂತರ ಗಣೇಶನ ನಿಮಜ್ಜನ ಮಾಡಲಾಗುವುದು ಎಂದು ಚನ್ನಬಸಯ್ಯ ತಿಳಿಸಿದ್ದಾರೆ.