ಆಗಸ್ಟ್ 25 ರಾತ್ರಿ 10 ಗಂಟೆಯ ಸುಮಾರಿಗೆ ಮೆಟ್ರೋ ಸಿಬ್ಬಂದಿ ಟ್ರ್ಯಾಕ್ ಗೆ ಬೀಳುತ್ತಾರೆ. ಗಮನವೆ ಇಲ್ಲದೆ ಬಿದ್ದಂತಹ ಸಿಬ್ಬಂದಿಯನ್ನು ಅಲ್ಲೇ ಇದ್ದಂತಹ ಪ್ರಯಾಣಿಕ ಮೇಲೆ ಬರೋದಿಕ್ಕೆ ಸಹಾಯ ಮಾಡ್ತಾನೆ. ಸಹಜವಾಗಿ ವಾಕ್ ಮಾಡ್ಕೊಂಡು ಹೋಗ್ತಾ ಇದ್ದಂತಹ ಮೆಟ್ರೋ ಸಿಬ್ಬಂದಿ ದಿಢೀರ್ ಹಳಿಗೆ ಬೀಳುವುದಕ್ಕೆ ಕಾರಣ ಏನು ಅಂತ ಯಾರಿಗೂ ಗೊತ್ತಿಲ್ಲ. ಒಂದು ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ 16 ಗಂಟೆಗೂ ಅಧಿಕ ಕಾಲ ಆತ ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನ್ನುವಂತಹ ಮಾಹಿತಿ ಇದೆ. ಕೆಲಸದ ಒತ್ತಡದಿಂದ ಹೀಗೆ ಆಗಿರಬಹುದು ಅನ್ನೋ ಅಭಿಪ್ರಾಯ ಇದೆ.