ಹಿಂದೂ ಯುವಕರ ತಲೆಯ ಮೇಲೆ ಟೋಪಿ ಮುಸ್ಲಿಂ ಯುವಕರ ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಅಗಸ್ಟ ೨೭ ಮಧ್ಯಾಹ್ನ ೩ ಗಂಟೆಗೆ ಕಂಡು ಬಂದಿತು. ಇಳಕಲ್ ನಗರ ಭಾವ್ಯಕ್ಯತೆಗೆ ಹೆಸರುವಾಸಿ ನಗರದ ಅಲಂಪೂರಪೇಟೆಯ ಯುವಕರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹಿಂದೂ ಮುಸ್ಲಿಂ ಎಂಬ ಜಾತಿ ಭೇದವನ್ನು ಮಾಡದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡುತ್ತಾ ಬಂದಿದ್ದಾರೆ. ಈ ವರ್ಷವೂ ಕೂಡ ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ವಿಶಿಷ್ಟ ಮತ್ತು ವಿಶೇಷವಾಗಿ ಗಣೇಶ ಹಬ್ಬವನ್ನು ಆಚರಿಸುತ್ತಾ ಭಾವೈಕ್ಯತೆಯನ್ನು ಸಾರಿದ್ದಾರೆ.