ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಶುಕ್ರವಾರದಂದು ಈದ್ ಮಿಲಾದ್ ಅಂಗವಾಗಿ ಬೃಹತ್ ಮೆರವಣಿಗೆಯನ್ನು ಸೆ.೦೫ ಮುಂಜಾನೆ ೧೧ ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು. ಮದೀನಾ ಮಸಜೀದದಿಂದ ಆರಂಭವಾದ ಮೆರವಣಿಗೆ ಮಹಾಂತೇಶ ಚಿತ್ರಮಂದಿರ, ನಗರಸಭೆ ಕಾರ್ಯಾಲಯ, ಕಂಠಿ ಸರ್ಕಲ್, ಸಾಲಪೇಟೆ, ಬಸವನಗುಡಿ, ವೆಂಕಟೇಶ ದೇವಸ್ಥಾನ, ಗಾಂಧಿ ಚೌಕ, ಗೊರಬಾಳ ನಾಕಾ, ವಾಲ್ಮೀಕಿ ದೇವಸ್ಥಾನ, ಅಲಂಪೂರಪೇಟೆಯ ಮಾರ್ಗವಾಗಿ ಮುರ್ತುಜಾ ಖಾದ್ರಿ ದರ್ಗಾಕ್ಕೆ ಹೋಗಿ ಅಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭಾಗವಹಿಸಿದ್ದರು ಅವರನ್ನು ಸಮಾಜದ ಬಾಂಧವರು ಸತ್ಕರಿಸಿ ಗೌರವಿಸಿದರು.ನೇತೃತ್ವವನ್ನು ಅಂಜುಮನ್ ಇಸ್ಲಾಂ ಸಂಸ್ಥೆಯ ಅ