ಹುಬ್ಬಳ್ಳಿಯಲ್ಲಿ ಗಣೇಶ ಭಕ್ತರು 56 ವಿವಿಧ ಬಗೆಯ ಸಿಹಿ ತಿನಿಸನ್ನು ಭಕ್ತರು ನೈವೇದ್ಯ ಮಾಡಿದ್ದಾರೆ. ಹುಬ್ಬಳ್ಳಿಯ ರಾಧಾಕೃಷ್ಣ ಗಲ್ಲಿ ಗಜಾನನ ಯುವಕ ಮಂಡಳ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು. ಮುದಕ್, ಕಡಬು, ಉಂಡಿ, ಪೇಡಾ, ಹೀಗೆ 56 ಸಿಹಿ ತಿನಿಸನ್ನು ನೈವೇದ್ಯ ಮಾಡಿ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.