ಹಾಸನ: ನಗರದ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಕಂದಾಯ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲೆಗೆ ಸಂಭಂದಿಸಿದ ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.ವಿವಿಧ ಇಲಾಖೆಗಳಿಗೆ ಸಂಭದಿದ ಹಲವು ದಿನಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಬಗೆಹರಿಸುವಂತೆ ಸಂಭದಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೆ ವೇಳೆ ಬಗಾಹರಿಸಬಹುದಾದ ಪ್ರಕರಣಗಳ ವಿಳಂಬ ಬೇಡ, ನ್ಯಾಯಾಲದಲ್ಲಿ ಇರುವ ಪ್ರಕರಣಗಳ ಹೊರತಾಗಿ ತಹಶೀಲ್ದಾರ್, ಹಾಗೂ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹಂತದಲ್ಲಿ ಬಗೆಹರಿಸಬಹುದಾದ ಪ್ರಕರಣಗಳ ವಿಳಂಬ ಬೇಡ ಆದಷ್ಟು ಬೇಗ ಇತ್ಯರ್ಥ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.