ನವಲಗುಂದ: ಗಣೇಶ ಚತುರ್ಥಿ ಅಂಗವಾಗಿ ನವಲಗುಂದ ಪಟ್ಟಣದ ಶಂಕರ್ ಕಾಲೇಜು ಮೈದಾನದಲ್ಲಿ ಹಾಕಲಾದ ಪಟಾಕಿ ಮಾರಾಟ ಮಳಿಗೆಗಳು ತಹಶಿಲ್ದಾರ ಸುಧೀರ ಸಾಹುಕಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಸರಕಾರ ಹಸಿರು ಪಟಾಕಿ ಮಾರಾಟಕ್ಕೆ ಪರವಾನಿಗೆ ನೀಡಿದ್ದು, ತಾಲೂಕು ಆಡಳಿತದಿಂದ ಪಟಾಕಿಗಳ ಪರಿಶೀಲನೆ ನಡೆಯಿತು. ಒಟ್ಟು ಏಳು ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು, ತಹಶಿಲ್ದಾರರು ಮೊಬೈಲ್ ಮೂಲಕ ಪರಿಶೀಲನೆ ನಡೆಸಿ, ವ್ಯಾಪಾರಸ್ಥರಿಗೆ ಆದೇಶ ಅನ್ವಯ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.