ಜಿಲ್ಲಾದಾದ್ಯಂತ ರೈತರು ಸಡಗರ ಸಂಭ್ರಮದಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿದರು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೊರಬ ತಾಲೂಕಿನ ಕುಬಟೂರಿನಲ್ಲಿ ಭೂ ತಾಯಿಗೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಪೂಜೆ ಸಲ್ಲಿಸಿ ಭೂಮಿ ಹುಣ್ಣಿಮೆ ಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗೆ ವಿಶೇಷ ಪೂಜೆ ಸಲ್ಲಿಸಿ ಭೂಮಿ ಹುಣ್ಣಿಮೆ ಆಚರಿಸಿದರು. ಈ ವೇಳೆ ಸಚಿವರ ಕುಟುಂಬಸ್ಥರು ಭಾಗವಹಿಸಿದರು.