ಹುಬ್ಬಳ್ಳಿ,: ಐತಿಹಾಸಿಕ ರಾಣಿ ಚೆನ್ನಮ್ಮ ಮೈದಾನದಲ್ಲಿ ಶ್ರೀಕೃಷ್ಣನ ಅವತಾರದ ಶ್ರೀ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಗರದ ಮೂರುಸಾವಿರಮಠದಿಂದ ರಾಣಿ ಚೆನ್ನಮ್ಮ ಮೈದಾನದವರೆಗೆ ಮೆರವಣಿಗೆಯು ಸಾಗಿ ಬಂದಿತು. ಈ ವೇಳೆ ಶಾಸಕರಾದ ಮಹೇಶ್ ಟೆಂಗಿನಕಾಯಿ, ಪ್ರಮುಖರಾದ ಡಾ. ವಿ.ಎಸ್.ವಿ ಪ್ರಸಾದ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.