ಶಿವಮೊಗ್ಗ ನಗರದ ಮಹಾನಗರ ಪಾಲಿಕೆಯ ವಾರ್ಡ್ ನಂ.30ರಲ್ಲಿ ಬರುವ ಕುಂಬಾರಕೇರಿ ಎಡ ಮತ್ತು ಬಲಭಾಗದ ಎರಡೂ ರಸ್ತೆಗಳು ಹಾಳಾಗಿದ್ದು, ಜನರಿಗೆ ಓಡಾಡಲು ತುಂಬಾ ತೊಂದೆಯಾಗಿರುತ್ತದೆ. ಕೂಡಲೇ ಈ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿ ಸೀಗೆಹಟ್ಟಿ ನಾಗರೀಕರ ಹಿತರಕ್ಷಣಾ ವೇದಿಕೆ ವತಿಯಿಂದ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರಿಗೆ ಬುಧವಾರ ಸಂಜೆ 4 ಗಂಟೆಗೆ ಮನವಿ ಸಲ್ಲಿಸಿದರು. ಕುಂಬಾರಕೇರಿ ಎಡ ಮತ್ತು ಬಲಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ವಯೋವೃದ್ಧರಿದ್ದು, ಹಾಳಾದ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದ್ದು, ಕೂಡಲೇ ಎರಡೂ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.