ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ವರ್ಗಗಳಿಗೆ ಅನುದಾನ ನೀಡುವ ಮೂಲಕ ಜನಪರವಾದ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಸರಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ' ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ 300 ರಿಂದ 400 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಯಾವುದೇ ಜಿಲ್ಲೆಗೂ ತಾರತಮ್ಯ ಮಾಡಿಲ್ಲ. ಇದು ಜನಪರವಾದ ಬಜೆಟ್ ಆಗಿದ್ದು, ಸಾರಿಗೆ ಇಲಾಖೆಗೆ ಪ್ರತಿ ವರ್ಷ ನಿಗದಿಯಾಗಿರುವಂತೆ ಅನುದಾನ ಬಿಡುಗಡೆಯಾಗಲಿದೆ. ಹಾಗಾಗಿ, ಸಾರಿಗೆ ಇಲಾಖೆಯ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ ಮತ್ತು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ' ಎ