Download Now Banner

This browser does not support the video element.

ಹುಬ್ಬಳ್ಳಿ: ಗ್ರಾಮದಲ್ಲಿ ಅಭಿವೃದ್ಧಿ ಕಾಣದ ಅದರಗುಂಚಿ ಪ್ಲಾಟ್ ರಸ್ತೆ :  ಹೆಚ್ಚಾಗಿದೆ ಸಾಂಕ್ರಾಮಿಕ ರೋಗದ ಭೀತಿ

Hubli, Dharwad | Aug 23, 2025
ಹುಬ್ಬಳ್ಳಿ : ಕುಂದಗೋಳ ಮತಕ್ಷೇತ್ರದ ಅದರಗುಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದರಗುಂಚಿ ಪ್ಲಾಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರ ಸಂಚಾರ ದುಸ್ಥರವಾಗಿದೆ. ಹೌದು  ಕಳೆದ ಹಲವು ವರ್ಷಗಳಿಂದ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ಜನರಿಗೆ ಕಷ್ಟವಾಗಿದೆ. ಈ ರಸ್ತೆಗೆ ಹೊಂದಿಕೊಂಡು ಅಂಗನವಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಎದ್ದು ಬಿದ್ದು ಸಂಚಾರ ಮಾಡುವ ಸಮಸ್ಯೆಗೆ ಜನ ರೋಸಿ ಹೋಗಿದ್ದು. ಅದರಗುಂಚಿ ಪ್ಲಾಟ್'ನ ದರ್ಗಾದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಗ್ರಾಮದ ಪ್ರಮುಖ ರಸ್ತೆಯಿದಾಗಿದ್ದು, ಈ ರಸ್ತೆ ದುರಸ್ತಿಗೆ ಗ್ರಾಮಸ್ಥರು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು,  ಸದಸ್ಯರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ
Read More News
T & CPrivacy PolicyContact Us