ಬಹಿರ್ದೆಸೆಗೆ ಹೋದ ಯುವತಿ ನಾಪತ್ತೆ : ದೂರು ಮನೆಯಿಂದ ಬಹಿರ್ದೆಸೆಗೆ ಹೋಗುತ್ತೇನೆ ಎಂದು ಹೇಳಿ ಹೋದ ೧೯ ವರ್ಷದ ಯುವತಿ ಮರಳಿ ಮನೆಗೆ ಬಂದಿಲ್ಲ ಎಂದು ಪಾಲಕರು ಇಳಕಲ್ ಗ್ರಾಮೀಣ ಪೋಲಿಸರಲ್ಲಿ ದೂರು ನೀಡಿದ್ದಾರೆ. ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದ ಯುವತಿ ಕೈಯಲ್ಲಿ ತಂಬಿಗೆ ಹಿಡಿದುಕೊಂಡು ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿಲ್ಲ ಎಂದು ತಂದೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾರೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದಾರೆ ಎಂದು ಸೆ.೦೯ ಮಧ್ಯಾಹ್ನ ೧೨ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.