ಗಣೇಶೋತ್ಸವದ ಒಬ್ಬತ್ತನೇ ದಿನದ ಗಣಪತಿ ಮೂರ್ತಿಗಳ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಗಣೇಶ ಚತುರ್ಥಿ ಹಬ್ಬದಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ 9ನೇ ದಿನವಾದ ಗುರುವಾರ ರಾತ್ರಿ 10ಗಂಟೆಗೆ ಬಲು ಜೋರಾಗಿ ನಡೆಯಿತು. ಒಂಬತ್ತನೇ ದಿನದಂದು ವಿಸರ್ಜನೆಗೆ ಕಳುಹಿಸುವಾಗ ವಿಶೇಷ ಪೂಜೆ, ಪುನಸ್ಕಾರಗಳನ್ನು ನೆರವೇರಿಸಲಾಯಿತು.ಯುವಕ-ಯುವತಿಯರು, ಮಕ್ಕಳು ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಗಣೇಶನನ್ನು ಸಡಗರದಿಂದ ಬೀಳ್ಕೊಟ್ಟರು. ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು.