ಬೆಂಗಳೂರು ಹೊರವಲಯದ ರೆಸಾರ್ಟ್ ಅಲ್ಲಿ ಆಗಸ್ಟ್ 28 ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಅನುಶ್ರೀ ಮದುವೆ ಆಯಿತು. ಪದ್ಯ ಅನುಶ್ರೀ ಮತ್ತು ರೋಷನ್ ಮದುವೆಗೆ ಶಿವಣ್ಣ ದಂಪತಿ ಹೋಗಿದ್ದಾರೆ. ಸುಮಾರು 2 ಗಂಟೆಯ ಹೊತ್ತಿಗೆ ಶಿವಣ್ಣ ಹೋಗಿದ್ದು ಅನುಶ್ರೀ ಮತ್ತು ರೋಷನ್ ಗೆ ಆಶೀರ್ವಾದ ಮಾಡಿದ್ದಾರೆ. ಈ ವೇಳೆ ಅನುಶ್ರೀ ತನ್ನ ತಾಳಿಯನ್ನು ಶಿವಣ್ಣನಿಗೆ ತೋರಿಸುತ್ತಾರೆ. ಅಂತೂ ಇಂತೂ ಅನುಶ್ರೀ ಮದುವೆ ಆಯ್ತು ಅಂತ ಶಿವಣ್ಣ ಹಾಸ್ಯ ಚಟಾಕಿ ಹಾರಿಸುತ್ತಾರೆ. ಈ ವೇಳೆ ಗೀತಕ್ಕ ಕೂಡ ಅನುಶ್ರೀ ತಾಳಿಗೆ ಕೈಮುಗಿದುಕೊಳ್ಳುತ್ತಾರೆ. ಅನುಶ್ರೀ ಕಾಲೆಳೆದಂತಹ ಚಿತ್ರಣ ಕಂಡು ಬಂತು.