ತಾಲ್ಲೂಕಿನ ನಾನಾ ಗ್ರಾಮಗಳಲ್ಲಿ ಮಂಗಳವಾರ ಮಾರಿ ಹಬ್ಬ ಆಚರಣೆ ಮಾಡುವ ಹಿನ್ನಲೆ ನಗರದಲ್ಲಿ ಸೋಮವಾರ ಟಗರು, ಕುರಿ,ಮೇಕೆಗಳ ಖರೀದಿ ಮಾಡಲು ಮುಗಿಬಿದ್ದಿದ್ದರು. ಮಾರಮ್ಮ ಹಬ್ಬವೆಂದರೆ ನೆಂಟರನ್ನು ಆಹ್ವಾನಿಸಿ ಬಾಟೂಡ ಮಾಡಿಸುವ ಪದ್ದತಿ ಇರುವುದರಿಂದ ನಗರದಲ್ಲಿ ದುಬಾರಿ ಬೆಲೆಯ ಟಗರುಗಳನ್ನು ಖರೀದಿ ಮಾಡಲು ಮುಂದಾಗಿದ್ದರು. ಮಾರಿ ಹಬ್ಬವೆಂದರೆ ವಿಶೇಷವಾಗಿ ಬಾಡೂಟ ಹಬ್ಬವೆಂದು ಕರೆಯುತ್ತಾರೆ. ಮಂಗಳವಾರದಿಂದ ಗುರುವಾರದವರೆಗೆ ಬಾಡೂಟ ಸವಿಯುವುದು ವಿಶೇಷವಾಗಿದೆ.