ನಗರದ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆ ಹಾಗು ರಸಗೊಬ್ಬರ ಮಾರಾಟಗಾರರ ಅಂಗಡಿಗಳಲ್ಲಿ ಗೊಬ್ಬರ ಸಿಗದಿರುವುದಕ್ಕೆ ಗುರುವಾರ ನನ್ನಿವಾಳ ಗ್ರಾಪಂ ವ್ಯಾಪ್ತಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲ ಮಾಡಿ ನಾವು ಬೀಜಗಳು ಖರೀದಿ ಮಾಡಿ ಬಿತ್ತನೆ ಮಾಡಿದ್ದೇವೆ ಈಗ ಸರಿಯಾದ ಸಮಯಕ್ಕೆ ಗೊಬ್ಬರುಗಳು ಸಿಗುತ್ತಿಲ್ಲವೆಂದು ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಯೂರಿಯಾ ಕೇಳಿದರೆ ಅಲ್ಲಿ ಹೋಗಿ, ಇಲ್ಲಿ ಹೋಗಿ ಅನ್ನುತ್ತಾರೆ ನಾವು ಬೆಳಿಗ್ಗೆಯಿಂದ ಊಟ ನೀರಿಲ್ಲದೆ ಗೊಬ್ಬರಕ್ಕೆ ಅಲೆದಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.