ಜೇವರ್ಗಿ ತಾಲ್ಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರತಾಪ್.ಸಿ.ಕಟ್ಟಿ ಅಧ್ಯಕ್ಷರಾಗಿ ಹಾಗೂ ಸಾಂಬಶಿವ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು 15 ನಿರ್ದೇಶಕರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 8, ಜೆಡಿಎಸ್‌ಗೆ 6 ಹಾಗೂ ಬಿಜೆಪಿಗೆ 1 ಸ್ಥಾನ ಸಿಕ್ಕಿತ್ತು. ಬಹುಮತ ಹೊಂದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಆಯ್ಕೆ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವ ಆಚರಿಸಲಾಯಿತು ಸೋಮವಾರ 5 ಗಂಟೆಗೆ ಸಂಭ್ರಮ ನಡೆಯಿತು...