ಹಾಸನ: ಎಲ್ಲಾರ ಗಮನಸೆಳೆದಿರುವ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಬುಧವಾರ ಮದ್ಯಾಹ್ನದಂದು ಗಣ್ಯರ ಎದುರು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಗಣೇಶ ಪ್ರತಿಷ್ಠಾಪನೆಯು ವಿಜೃಂಭಣೆಯಿಂದ ನೆರವೇರಿತು. ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ ಪಾಂಚಜನ್ಯವತಿಯಿಂದ ಎಲ್ಲಾ ಸ್ವಯಂ ಸೇವಕರು ಸೇರಿ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನಮ್ಮ ಜಿಲ್ಲೆ ಮತ್ತು ರಾಜ್ಯದ ಜನೆತೆಗೆ ಆರೋಗ್ಯ, ಆಯಾಸ್ಸು, ಐಶ್ವರ್ಯ ಮತ್ತು ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ, ಉತ್ತಮ ಮಳೆ, ಬೆಳೆ ಆಗಿ ರೈತರಲ್ಲಿ ಸಂತೋಷ ಉಂಟು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.