ದಂಪತಿಯ ಜಗಳದ ನಡುವೆ ಒಂದೂವರೆ ವರ್ಷದ ಮಗು ಬಲಿಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬ್ಯಾಡರಹಳ್ಳಿ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು ತಾಯಿ ಚಂದ್ರಿಕಾಳಿಂದ ವಿಶಪ್ರಾಷನವಾಗಿದ್ದ ಹೆಣ್ಣುಮಗು ಚಾರ್ವಿ ಮೃತಪಟ್ಟಿದೆ. ಗಂಡ ಯೋಗೇಶ್ ಪಾನಮತ್ತನಾಗಿ ಬರುತ್ತಿದ್ದ, ಆರ್ಥಿಕವಾಗಿ ಸಂಸಾರಕ್ಕೆ ನೆರವಾಗುತ್ತಿಲ್ಲ ಎಂದು ಜಗಳ ಮಾಡಿಕೊಂಡಿದ್ದ ಚಂದ್ರಿಕಾ, ಬುಧವಾರ ಆತ ಕೆಲಸಕ್ಕೆ ಹೋಗಿದ್ದಾಗ ಟೀಯಲ್ಲಿ ಇಲಿಪಾಶಾಣ ಬೆರೆಸಿ ಮಗುವಿಗೆ ಕುಡಿಸಿ, ತಾನೂ ಕುಡಿದಿದ್ದಾಳೆ. ನಂತರ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.ಕೂಡಲೆ ಪತಿ ಯೋಗೇಶ್ ಬಂದು ತಾಯಿ ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾನೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 31ರಂದು ಮುಂಜಾನೆ 8 ಗಂಟೆ ಸುಮಾರಿಗೆ ಮಗು ಸಾವನ್ನಪ್ಪಿದೆ.