ರಾಜ್ಯದ ಹಲವೆಡೆ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಗಲಾಟೆಗಳು ನಡೆಯುತ್ತಿವೆ. ಇದರ ನಡುವೆ ಬಳ್ಳಾರಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ. ನಗರದ ವಡ್ಡರಬಂಡೆ ಪ್ರದೇಶದಲ್ಲಿ ಶ್ರೀವಿನಾಯಕ ಮಿತ್ರ ಬಳಗದಿಂದ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು ಗಣೇಶೋತ್ಸವದಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದಾರೆ. ಪರಸ್ಪರ ಶುಭ ಕೋರಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಪಾಲ್ಗೊಂಡು ಮಾತನಾಡಿದ ವಾರ್ಡಿನ ಪಾಲಿಕೆ ಸದಸ್ಯ ನೂರ್ ಮೊಹಮ್ಮದ್ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಹಿಂದೂ ಹಾಗೂ ಮುಸ್ಲಿಂರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿಕೊಂಡು ಬರುತ್ತಿರುವುದು ನಮ್ಮ ವಾರ್ಡಿನ ವಿಶೇಷವಾಗಿದೆ.ಭಾರತ ಹಲವು ವೈವಿಧ್ಯತೆ ಹೊಂದಿರುವ ದೇಶ. ಇಲ್ಲಿ ಅನೇಕ ಧರ್ಮ, ಭಾಷೆಗಳಿವೆ. ಎಲ್ಲರೂ ಒ