ಹುಬ್ಬಳ್ಳಿ: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕ್ಷುಲ್ಲಕ ವಿಷಯವಾಗಿ ಓರ್ವ ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಶನಿವಾರ ರಾತ್ರಿ ಇಲ್ಲಿನ ಕೊಪ್ಪಿಕರ ರಸ್ತೆ ಬಳಿ ನಡೆದಿದೆ.ಬೀಡನಾಳ ಮಾರುತಿ ನಗರದ ಪ್ರತಾಪ ಉರ್ಫ ಚೇತನ ಗೌಡರ (32) ಹಲ್ಲೆಗೊಳಗಾಗಿದ್ದು, ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋನಿಯಾ ಗಾಂಧಿ ನಗರದ ಶಿರಿ ಹಾಗೂ ಇನ್ನಿಬ್ಬರು ಸೇರಿ ಪ್ರತಾಪನ ಪಕ್ಕಡಿಯ ಬಳಿ ಇರಿದಿದ್ದಾನೆಂದು ಹೇಳಲಾಗುತ್ತಿದೆ. ಪ್ರತಾಪ ಟ್ರಾನ್ಸಪೋರ್ಟ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು ಎಂದು ಮೂಲಗಳು ತಿಳಿಸಿವೆ.ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದ್ದು, ನಿಖರ ಕಾರಣ ತಿಳಿದುಬಂದಿದೆ. ಸದ್ಯ ಗಾಯಾಳು ಪ್ರಾಣಾಪಾಯದಿಂದ ಪಾ