ಡಿ ಗ್ರೂಪ್ ನೌಕರರ ಸೇವಾ ನೇಮಕಾತಿಯ ನಿರ್ಬಂಧವನ್ನು ತಕ್ಷಣ ಕೈಬಿಡಬೇಕೆಂದು ಅಖಿಲ ಕರ್ನಾಟಕ ಮಹಾ ಮಂಡಳದ ಗೌರವಾಧ್ಯಕ್ಷ ಭೀಮರಾವ ಯರಗೋಳ ಆಗ್ರಹಿಸಿದ್ದಾರೆ. ಶುಕ್ರವಾರ 2 ಗಂಟೆಗೆ ಮಾತನಾಡಿದ ಅವರು, ಕಲಬುರಗಿ ವಿಭಾಗೀಯ ಕಚೇರಿಯ ಏಳು ಜನರ ನೇಮಕಾತಿ ಪ್ರಕ್ರಿಯೆ ಬಾಕಿ ಉಳಿದಿದ್ದು, ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ನೇಮಕಾತಿ ಆದೇಶ ಹೊರಡಿಸಬೇಕೆಂದು ಯರಗೋಳ ಅವರು ಒತ್ತಾಯಿಸಿದರು.