ಭಟ್ಕಳ: ತಾಲೂಕಿನ ಶಿರಾಲಿ ಗುಡಿಹಿತ್ತಲು ನ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಾರಗದ್ದೆಯ ದರ್ಶನ ಮಂಜುನಾಥ ನಾಯ್ಕ ಮತ್ತು ಶಿರಾಲಿ ಗುಡಿಹಿತ್ತಲು ನಿವಾಸಿ ನಾರಾಯಣ ನಾಗಪ್ಪ ಎಂದು ಗುರುತಿಸಲಾಗಿದೆ. ಇವರು ಆ ೨೯ರ ಮಧ್ಯರಾತ್ರಿ ಭಟ್ಕಳ ತಾಲೂಕಿನ ಶಿರಾಲಿ ಗುಡಿಹಿತ್ತಲು ಗ್ರಾಮದ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ಒಡೆದು, ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಬೈಕ ಒಳಗೊಂಡಂ